ಕಂಪನವು (ಸ್ಪಂದನ) ಒಂದು ಯಾಂತ್ರಿಕ ವಿದ್ಯಮಾನವಾಗಿದ್ದು, ಇದರಲ್ಲಿ ಒಂದು ಸಮತೋಲನ ಬಿಂದುವಿನ ಸುತ್ತ ತೂಗಾಟಗಳು/ಆಂದೋಲನಗಳು ಸಂಭವಿಸುತ್ತವೆ. ತೂಗಾಟಗಳು ನಿಯತಕಾಲಿಕವಾಗಿರಬಹುದು, ಉದಾಹರಣೆಗೆ ಒಂದು ಲೋಲಕದ ಚಲನೆ—ಅಥವಾ ಯಾದೃಚ್ಛಿಕವಾಗಿರಬಹುದು, ಉದಾಹರಣೆಗೆ ಜಲ್ಲಿ ರಸ್ತೆಯ ಮೇಲೆ ಒಂದು ಗಾಲಿಯ ಚಲನೆ. ಕಂಪನವು ಅಪೇಕ್ಷಣೀಯವಿರಬಹುದು: ಉದಾಹರಣೆಗೆ, ಶ್ರುತಿಕವೆಯ ಚಲನೆ, ಗಾಳಿವಾದ್ಯ ಅಥವಾ ರಾಗಮಾಲಿಕೆಯಲ್ಲಿನ ಸ್ಪಂದಕ, ಮೊಬೈಲ್ ಫ಼ೋನ್, ಅಥವಾ ಧ್ವನಿವರ್ಧಕದ ಶಂಕು. ಆದರೆ, ಅನೇಕ ಸಂದರ್ಭಗಳಲ್ಲಿ, ಕಂಪನವು ಅನಪೇಕ್ಷಣೀಯವಾಗಿದ್ದು, ಶಕ್ತಿಯನ್ನು ವ್ಯರ್ಥಮಾಡುತ್ತದೆ ಮತ್ತು ಬೇಡದ ಶಬ್ದವನ್ನು ಸೃಷ್ಟಿಸುತ್ತದೆ. == ಹೆಚ್ಚಿನ ಓದಿಗಾಗಿ ==